ಉಕ್ರೇನ್: ನಮ್ಮ ಎರಡು ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಅಕ್ರಮವಾಗಿ ರಷ್ಯಾಗೆ ಕರೆದೊಯ್ಯಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವ್ಲಾದಿಮೀರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನಿನ 200,000 ಮಕ್ಕಳನ್ನು ಬಲವಂತವಾಗಿ ರಷ್ಯಾಕ್ಕೆ ಕರೆದೊಯ್ದು ಅವರು ಮತ್ತೆ ನಮ್ಮ ರಾಷ್ಟ್ರಕ್ಕೆ ವಾಪಸ್ಸಾಗದಂತೆ ರಷ್ಯಾದಲ್ಲಿ ಚದುರಿಹೋಗಿದ್ದಾರೆ ಎಂದು ಝೆಲೆನ್ಸ್ಕಿ ಆತಂಕ ವ್ಯಕ್ತಪಡಿಸಿದ್ದಾರೆ.
ಅವರು ಅನಾಥಾಶ್ರಮಗಳ ಮಕ್ಕಳು, ಅವರ ಪೋಷಕರೊಂದಿಗೆ ಕರೆದೊಯ್ಯಲ್ಪಟ್ಟ ಮಕ್ಕಳು ಮತ್ತು ಅವರ ಕುಟುಂಬಗಳಿಂದ ಬೇರ್ಪಟ್ಟವರು. ಈ ಕ್ರಿಮಿನಲ್ ನೀತಿಯ ಉದ್ದೇಶವು ಜನರನ್ನು ಕದಿಯುವುದು ಮಾತ್ರವಲ್ಲ, ಗಡೀಪಾರು ಮಾಡಿದವರು ಉಕ್ರೇನ್‍ಗೆ ಹಿಂತಿರುಗಲು ಸಾಧ್ಯವಾಗದಂತೆ ಮಾಡುವುದಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಂತರರಾಷ್ಟ್ರೀಯ ಮಕ್ಕಳ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಈ ಆರೋಪ ಮಾಡಿದ್ದಾರೆ.
- ನ್ಯೂಸ್ ಬ್ಯೂರೋ true news ಕನ್ನಡ.