ಪದ್ಮವಾಣಿ

ರಾಜಕೀಯ ಆಟಕ್ಕೆ ಚೆಂಡಾದ ತಾಯಿ; ತಾನು ಮಾಡದ ತಪ್ಪಿಗೆ ತಾಯಿಗೆ ಅವಮಾನ

ಉಡುಪಿ: ಕೃಷ್ಣನ ಬೀಡು ಇದೀಗ ರಾಜಕೀಯ ದಾಹಕ್ಕೆ ಸುದ್ದಿ ಯಾಗುತ್ತಿದೆ. ಸರ್ವಧರ್ಮ ಸಮನ್ವಯತೆಯನ್ನು ಸಾರಿದಂತಹ ಕೃಷ್ಣ ನಗರಿ ಇದೀಗಿನ ದಿನದಲ್ಲಿ ಉಡುಪಿಯ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವಿನ ರಾಜಕೀಯ ಕೆಸರೆರೆಚಾಟ ಜೋರಾಗಿದೆ.

ಹೌದು.. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಅದು ತಾಯಿ ಮಗಳ ಧರ್ಮದ ಮೇಲಿನ ಆರೋಪ ಪ್ರತಿ ಆರೋಪ. ಉಡುಪಿಜಿಲ್ಲೆಯ ಉಸ್ತುವಾರಿ ಸಚಿವರು ಉಡುಪಿಗೆ ಬೇಟಿ ನೀಡುವ ಸಂದರ್ಭದಲ್ಲಿ ಬುರ್ಕಾ ದಾರಿಯಾದ ಎರಡು ಮಹಿಳೆಯರು ಮತ್ತೆ ಹಿರಿಯ ಮಹಿಳೆ ಗಿರಿಜಾ ಶೆಟ್ಟಿಗಾರ್ ಎಂಬವರು ತನ್ನ ಬಡಗಬೆಟ್ಟು ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಅನುಮತಿ ನೀಡಬೇಕಾದ ಅನಿವಾರ್ಯ ಇರುವುದರಿಂದ ಸುಮಾರು ಮೂವತ್ತು ವರ್ಷ ದಿಂದ ಮನೆ ನಿರ್ಮಾಣಕ್ಕೆ ಆಗುವ ಸಮಸ್ಯೆಯನ್ನು ತಿಳಿಸುವುದಕ್ಕೆ ಮುಂದಾಗುತ್ತಾರೆ. ಆದ್ರೆ ಸಚಿವರಿಗೆ ತಪ್ಪು ಮಾಹಿತಿ ನೀಡಿದಂತಹ ಬುರ್ಖಾದಾರಿ ಮಹಿಳೆಯರು ಅವರು ಬಾಡಿಗೆ ಮನೆಯಲ್ಲಿ ಇರುವುದು ನಾವು ಪಕ್ಕದ ಮನೆಯವರು ಎಂದು ಹೇಳಿದ ಮಾತಿಗೆ ತಕ್ಷಣವೇ ಆಲೋಚನೆ ಮಾಡದೆ ನೀಡಿದ ಹೇಳಿಕೆ ಇಂದು ಬಿಜೆಪಿಗೆ ಅಸ್ತ್ರವಾಗಿದೆ. ಅಷ್ಟೇ ಯಾಕೆ ಈ ವಿಷಯದಲ್ಲಿ ಬಿಜೆಪಿಯು ಎಡವಿದೆ ಎಂದ್ರೆ ತಪ್ಪಾಗಲಾರದು.

ಆದ್ರೆ ಈ ವಿಚಾರದಲ್ಲಿ ಒಂದು ವಿಷಯ ತಿಳಿಯ ಬೇಕಾಗಿರುವ ಅಗತ್ಯ ಇದೆ . ತಾಯಿ ವೃದ್ದೆಯನ್ನು ಬಳಸಿ ಕೊಂಡು ಸಿಂಪತಿ ಗಿಟ್ಟಿಸುವ ಮಗಳ ಆಲೋಚನೆ ಇಂದು ಹಿಂದು ತಾಯಿಯನ್ನು ಬೀದಿಗೆ ತಂದು ನಿಲ್ಲಿಸಿತು ಎಂದ್ರೆ ತಪ್ಪಾಗಲಾರದು. ತಾಯಿ ಇಂದಿಗೂ ಮತಾಂತರ ಆಗಿರುವುದಕ್ಕೆ ಸರಿಯಾದ ದಾಖಲೆ ಇಲ್ಲ. ಮತಾಂತರ ಕಾನೂನಿನ ಪ್ರಕಾರ ಆಗಿದ್ರೆ ಅವರ ಹೆಸರು ಮತ್ತು ಜಾತಿ ಬದಲಾವಣೆ ಆಗಬೇಕಾಗಿತ್ತು. ಇಂದಿಗೂ ಅವರು ಹುಟ್ಟಿದ ಧರ್ಮದಲ್ಲಿ ಇದ್ದಾರೆ ಎಂಬುದು ಮೇಲ್ ನೋಟಕ್ಕೆ ಕಂಡು ಬರುವ ಸತ್ಯ . ಮಗಳು ಪ್ರೀತಿಗೆ ಬಿದ್ದು ಆ ವ್ಯಕ್ತಿಯ ಧರ್ಮಕ್ಕೆ ಮತಾಂತರ ಹೊಂದಿರಬಹುದು ಅಂದರೆ ಅವಳು ಮುಸ್ಲಿಂ ಧರ್ಮದ ಪಾಲನೆ ಮಾಡಬಹುದು ಆದುದರಿಂದ ಆಕೆ ಈಗ ಮುಸ್ಲಿಂ ಮಹಿಳೆ. ಮುಪ್ಪಿನ ಸಮಯದಲ್ಲಿ ಮಗಳ ಆಶ್ರಯ ಪಡೆದಿರಬಹುದು. ಅನಿವಾರ್ಯ ಕಾರಣದಿಂದ. ಮಗಳು ಮತಾಂತರ ಗೊಂಡರೆ ಹಾಗಾದರೆ ಅವರ ಕುಟುಂಬ ಸದಸ್ಯರು ಮತಾಂತರ ಗೊಂಡಂತಾಯಿತೆ? ಹಾಗೆ ತಮ್ಮದೇ ಪಕ್ಷದಲ್ಲಿ ಇರುವ ಮಹಾನ್ ಘಟಾನುಘಟಿ ನಾಯಕರುಗಳ ಮಕ್ಕಳು ಮದುವೆ ಯಾಗಿರುವುದು ನೆನಪಿಸ ಬೇಕಾಗಿದೆ. ಅಂದ್ರೆ ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯವೇ!? ಈ ರಾಜಕೀಯ ಪಕ್ಷಗಳು ತಮ್ಮ ಪ್ರಚಾರಕ್ಕೆ ಯಾವ ಮಟ್ಟಕ್ಕೆ ತಲುಪುತ್ತದೆ ಎನ್ನುವುದಕ್ಕೆ ಈ ಪ್ರಕರಣ ಉತ್ತಮ ಉದಾಹರಣೆ.

ಶೆಟ್ಟಿಗಾರ್ ಸಮಾಜದ ವೃದ್ಧೆ ಎಂದು  ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ತಕ್ಷಣವೇ ಈ ಗೊಂದಲಕ್ಕೆ ತೆರೆ ಎಳೆಯ ಬೇಕಾಗಿತ್ತು. ಆ ಜವಾಬ್ದಾರಿ ಮರೆತಂತೆ ಕಾಣುತ್ತದೆ ಸಮಾಜದ ಮುಖಂಡರು. ಗಿರಿಜಾ ಶೆಟ್ಟಿಗಾರ್ ತನ್ನ ಸಮುದಾಯಕ್ಕೆ ಸೇರಿದವರೇ ಅಥವಾ ಅಲ್ಲವೇ ಎಂದು ಸ್ಪಷ್ಟ ಪಡಿಸಬೇಕಾಗಿತ್ತು ಅದೇ ಕರಾವಳಿ ಪ್ರದೇಶಗಳಲ್ಲಿ ಬೇರೆ ಒಂದು ಜಾತಿಯ ಸಮುದಾಯದವರು ಆಗಿರುತ್ತಿದ್ದರೆ ತಕ್ಷಣವೇ ಪತ್ರಿಕಾಗೋಷ್ಠಿ ಕರೆದು ದಿಟ್ಟ ಉತ್ತರ ನೀಡುತ್ತಿದ್ದರು. ಪದ್ಮಶಾಲಿ ಸಮಾಜ ಮುಖಂಡರು ಮೌನಕ್ಕೆ ಜಾರಿದು ವಿಪರ್ಯಾಸವೆ ಸರಿ.

ಎರಡೂ ಪಕ್ಷದ ನಾಯಕಿಯರು ತಮ್ಮ ಪ್ರಚಾರದ ಆಸೆಗೆ ಆ ತಾಯಿಯನ್ನು ಬೀದಿಗೆ ತಂದು ನಿಲ್ಲಿಸಿದ ಸಾಧನೆ ಎರಡೂ ಪಕ್ಷಕ್ಕೆ ಸಲ್ಲಬೇಕು. ತಾಯಿಯನ್ನು ಮಾತೆ ಎಂದು ಪೂಜಿಸುವವರು ತಮ್ಮ ಪ್ರಚಾರದ ಕೆಟ್ಟ ಆಲೋಚನೆಯಲ್ಲಿ ಆ ಹಿರಿಯ ವಯಸ್ಸಿನ ತಾಯಿಗೆ ನೋವು ಕೊಟ್ಟಿರುವುದು ಅಷ್ಟೇ ಸತ್ಯ. ಕಾಂಗ್ರೆಸ್ ಹಾಗೂ ಬಿಜೆಪಿ ತಪ್ಪುಗಳನ್ನು ಗಮನಿಸದೆ  ಮೋಸದಿಂದ ಜನರನ್ನೂ ಮೂರ್ಖರನ್ನಾಗಿ‌ ಮಾಡಿರುವುದು ಮಾತ್ರ ಅಷ್ಟೇ ಸತ್ಯ.


ಕಾಮೆಂಟ್ ಬಿಡಿ

Join Us