ಜಿಲ್ಲಾ ಸುದ್ದಿಗಳು

ಶ್ರೀ ರಾಮ ಯುವಕ ವೃಂದ,ಗೋಳಿಜೋರ ಇದರ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಶಯನ್ ಶೆಟ್ಟಿಗಾರ್

ಕಿನ್ನಿಗೋಳಿ: ಗೋಳಿಜೋರ ಪ್ರದೇಶದಲ್ಲಿ ಸಕ್ರಿಯವಾಗಿರುವ ಒಂದು ಸ್ಥಳೀಯ ಯುವಕರ ಸಂಘಟನೆಯೇ ಶ್ರೀ ರಾಮ ಯುವಕ ವೃಂದ, ಗೋಳಿಜೋರ. ಈ ಯುವಕ ವೃಂದವು ಆ ಭಾಗದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವಲ್ಲಿ ಈ ಯುವಕ ವೃಂದಗಳು ಮಹತ್ವದ ಕೊಡುಗೆ ನೀಡುತ್ತವೆ.  

ಶ್ರೀ ರಾಮ ಯುವಕ ವೃಂದ ಗೋಳಿಜೋರ ಇದರ ಮಹಾ ಸಭೆಯು ಮೇ 10ರ ಭಾನುವಾರ ನಡೆಯಿತು. 2026/27ನೇ ಸಾಲಿನ ಅಧ್ಯಕ್ಷರಾಗಿ ಶಯನ್ ಶೆಟ್ಟಿಗಾರ್ ಕುಜಿಂಗಿರಿ, ಕಾರ್ಯದರ್ಶಿಯಾಗಿ ನಿಕ್ಷಿತ್ ಗೋಳಿಜೋರ, ಕೋಶಾಧಿಕಾರಿಯಾಗಿ ರಾಜೇಶ್ ಗೋಳಿಜೋರ ಆಯ್ಕೆಯಾದರು.  ಗೌರವ ಅಧ್ಯಕ್ಷರು ಸಂತೋಷ್ ಕುಮಾರ್ ಹೆಗ್ಡೆ ಆಡಳಿತ ಮೋಕ್ತಸರರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎಳತ್ತೂರು ಗೌರವ ಸಲಹೆಗಾರರು ಸುಧಾಕರ ಶೆಟ್ಟಿ ಹೊಸ ಸಮಿತಿಯ ಸದಸ್ಯರಾಗಿ ಸರ್ವಾನುಮತದಿಂದ ಆಯ್ಕೆಗೊಂಡರು. 

ಕಾಮೆಂಟ್ ಬಿಡಿ

Join Us