ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನ ನೇಮೋತ್ಸವ; ಧ್ವಜಾರೋಹಣ
ಮೂಲ್ಕಿ: ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದ ಆಡಳಿಕ್ಕೊಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ,ಧೂಮಾವತಿ ದೈವಸ್ಥಾನದಲ್ಲಿ ಶ್ರೀ ಜಾರಂದಾಯ, ಧೂಮಾವತಿ ಮತ್ತು ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಶನಿವಾರ ಮಧ್ಯಾಹ್ನ ಶ್ರೀ ಜಾರಂದಾಯ ಮತ್ತು ಧೂಮಾವತಿ ದೈವದ ದರ್ಶನದೊಂದಿಗೆ ಭಂಡಾರ ಇಳಿದು ಧ್ವಜಾರೋಹಣ ನೆರವೇರಿತು. ಈ ಸಂದರ್ಭ ಊರ ಗುರಿಕಾರರು. ದೈವಸ್ಥಾನದ ಸಮಿತಿಯ.ಮಹಿಳಾ ಮಂಡಳಿ ಮತ್ತು ಯೂತ್ ಕ್ಲಬ್ಬಿನ ಪದಾಧಿಕಾರಿಗಳು. ಸಾನದ ಮನೆಯವರು.ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.,12 ರ ಆದಿತ್ಯವಾರ ಬೆಳಗ್ಗೆ 10 ಕ್ಕೆ ದ್ಯೆವಸ್ತಾನದ ನಾಗ ಸನ್ನಿದಿಯಲ್ಲಿ ಅಂಚನ್ ಮೂಲದವರ ನಾಗತಂಬಿಲ,ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 9.30ಕ್ಕೆ ಶ್ರೀ ಜಾರಂದಾಯ, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
ಕಾಮೆಂಟ್ ಬಿಡಿ