ಜಿಲ್ಲಾ ಸುದ್ದಿಗಳು

ಕೊಳಚಿಕಂಬಳ ನೇಮೋತ್ಸವ;ನಾಗ ಸನ್ನಿಧಿಯಲ್ಲಿ ನಾಗತಂಬಿಲ

ಮುಲ್ಕಿ: ಕೊಳಚಿಕಂಬಳ ಜಾರಂದಾಯ, ಧೂಮಾವತಿ ದೈವಸ್ಥಾನದಲ್ಲಿ ಭಾನುವಾರ ರಾತ್ರಿ ಜಾರಂದಾಯ, ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಿತು.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದಲ್ಲಿ ಭಾನುವಾರ ರಾತ್ರಿ ಜಾರಂದಾಯ, ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಿತು.

ಶನಿವಾರ ಮಧ್ಯಾಹ್ನ ಜಾರಂದಾಯ ಮತ್ತು ಧೂಮಾವತಿ ದೈವದ ದರ್ಶನದೊಂದಿಗೆ ಭಂಡಾರ ಇಳಿದು ನಡೆಯಿತು. ಧ್ವಜಾರೋಹಣ ಭಾನುವಾರ ಬೆಳಗ್ಗೆ ದೈವಸ್ಥಾನದ ನಾಗ ಸನ್ನಿಧಿಯಲ್ಲಿ ನಾಗತಂಬಿಲ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ, ರಾತ್ರಿಜಾರಂದಾಯ, ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಿತು.

ಪ್ರಾಣೇಶ್ ಪೂಜಾರಿ ಸಾನದ ಮನೆ, ಕೃಷ್ಣ ಆರ್ ಕೋಟ್ಯಾನ್ ಸಾನದಮನೆ, ತೇಜ ಪೂಜಾರಿ, ರಾಘು ಸುವರ್ಣ ಹರಿಶ್ಚಂದ್ರ ಸಾಲ್ಯಾನ್, ಸೇವಾಸಮಿತಿ ಅಧ್ಯಕ್ಷರು ಪ್ರಕಾಶ್ ಸುವರ್ಣ, ಕಾರ್ಯದರ್ಶಿ ಶೇಖರ್ ಪೂಜಾರಿ,ಯೂತ್ ಕ್ಲಬ್ ಅಧ್ಯಕ್ಷರು ಚರಣ್ ಬಂಗೇರ, ಕಾರ್ಯದರ್ಶಿ ಕಾರ್ತಿಕ್ ಕೋಟ್ಯಾನ್, ಜೊತೆ ಕಾರ್ಯದರ್ಶಿ ಸುನಿಲ್ ,ಮಹಿಳಾ ಮಂಡಳಿ ಅಧ್ಯಕ್ಷರು ಲತಾಶೇಖರ್ ಉಪಸ್ಥಿತರಿದ್ದರು.

ಕಾಮೆಂಟ್ ಬಿಡಿ

Join Us