ಜಿಲ್ಲಾ ಸುದ್ದಿಗಳು

ಇನ್ನೆಷ್ಟು ಅಮಾಯಕರ ಜೀವ ಬಲಿಯಾಗಬೇಕು; ಮುಲ್ಕಿ ಜಂಕ್ಷನ್ ಡೇಂಜರ್ ಜೋನ್

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ  ಸ್ಕೂಟರ್ ಗೆ ಕಾರು ಡಿಕ್ಕಿ ಸ್ಕೂಟರ್ ಸವಾರ ಶಶಿಕುಮಾರ್ ಬಲಿ. 

ಮುಲ್ಕಿಯ ಕಕ್ವ ನಿವಾಸಿ ಶಶಿಕುಮಾರ್ ತಮ್ಮ ಸ್ಕೂಟರ್ನಲ್ಲಿ ಮುಲ್ಕಿ ಜಂಕ್ಷನ್ ಕ್ರಾಸ್ ಮಾಡುತ್ತಿರುವಾಗ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಶಶಿಕುಮಾರ್ ಬಲಿ. ಅಪಘಾತದ ಭೀಕರ ದೃಶ್ಯ ಹೆದ್ದಾರಿ ಸಿಸಿ ಕ್ಯಾಮೆರಾದಲ್ಲಿ ಸೆರೆ. ಸ್ಕೂಟರ್ ಸವಾರನ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶಾರದಾ ರವರ ಪುತ್ರ ಮೃತ ಶಶಿಕುಮಾರ್.ಚಾಲಕ ರಫೀಕ್ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಗೊಂಡ ಬಳಿಕ ಹೆದ್ದಾರಿ ಮುಲ್ಕಿ ಜಂಕ್ಷನ್ ಡೇಂಜರ್ ಜೋನ್ ಆಗಿ ಪರಿವರ್ತನೆಗೊಂಡಿದೆ. ಇನ್ನೆಷ್ಟು ಅಮಾಯಕರ ಜೀವ ಬಲಿಯಾಗಬೇಕು? ಮುಲ್ಕಿಯಲ್ಲಿ ಅಪಘಾತಕ್ಕೆ ಕಾರಣವಾಗುತ್ತಿದೆ ಡಿವೈಡರ್ ಎಂಬುದು ಸಾರ್ವಜನಿಕರ ದೂರು. ಹೆದ್ದಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು  ಸಾರ್ವಜನಿಕರ ಆಗ್ರಹ. 


ಕಾಮೆಂಟ್ ಬಿಡಿ

Join Us